ಗುರುಭ್ಯೋ ನಮಃ
ನಮ್ಮಲ್ಲಿ ವಿಶೇಷ ಪೂಜಾದಿಗಳನ್ನು ಮಾಡುವಾಗ ಸಾಮಾನ್ಯವಾಗಿ ನೆಲದಲ್ಲಿ ಮಂಡಲ ಬರೆದು ಪೂಜಿಸುತ್ತೇವೆ..ಪ್ರತಿ ದೇವತೆಗೂ ಪುರಾಣಗಳಲ್ಲಿ ಹೇಳಿದಂತೆ ರೂಪವಿರುವುದಿಲ್ಲ..ಒಂದೊಂದು ದೇವತೆಗೂ ಅವರದ್ದೇ ಆದ ಚಿಹ್ನೆಗಳಿಂದ ಪೂಜಿಸುವುದು ಕ್ರಮ.ಆದರೆ ಹೆಚ್ಚಿನ ಜನ ಸಾಮಾನ್ಯರಿಗೆ ಯಾವ ಮಂಡಲ ಯಾವ ದೇವತೆಯದ್ದೆಂದು ಪರಿಚಯವಿರುವುದಿಲ್ಲ.ಅಂಥವರ ಅನುಕೂಲಕ್ಕಾಗಿ ಹಿರಿಯರ ಅಪೇಕ್ಷೆಯ ಮೇರೆಗೆ ನನ್ನ ತಿಳುವಳಿಕೆಯ ಮಿತಿಯಲ್ಲಿ ಮಂಡಲಗಳ ಪರಿಚಯ ಮಾಡಲು ಪ್ರಯತ್ನಿಸುತ್ತೇನೆ..ನಾನು ತಿಳಿಸುವ ಮಂಡಲಗಳ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದವರು ಅಭಿಪ್ರಾಯ(comment) ಮೂಲಕ ತಿಳಿಸಬಹುದು..
ಮೊದಲಿಗೆ ನಮ್ಮ ಗುರು ಪರಂಪರೆಯನ್ನೂ,ನಿರ್ವಿಘ್ನತೆಗಾಗಿ ಗಣಪತಿಯನ್ನೂ ಪೂಜಿಸುವುದು ವಾಡಿಕೆ.
ಇಂದು ಗುರು ಮಂಡಲದ ಬಗ್ಗೆ ತಿಳಿದುಕೊಳ್ಳೋಣ..
ಗುರು ಮಂಡಲಕ್ಕೆ ಉಳಿದ ಮಂಡಲಕ್ಕೆ ಇರುವಂತೆ ಯಾವಿದೇ "ರೀತಿ ಸಂಹಿತೆ"ಯಿಲ್ಲದಿರುವುದರಿಂದ
ಶಿವಳ್ಳಿ,ಕೋಟ,ಕರ್ಹಾಡ,ಚಿತ್ಪಾವನ..ಇತ್ಯಾದಿ ಪಂಗಡದವರು ಯಾವ ಪೂಜೆ,ಹೋಮ ಮಾಡುವುದಿದ್ದರೂ ಎಡ ಬದಿಯಲ್ಲಿ ಚಿತ್ರದಲ್ಲಿ ಬರೆದಂತೆ "ಶ್ರೀಃ" ಅಥವಾ "ಶಂಖ"ದ ಚಿತ್ರ ಬಿಡಿಸಿ ಅದರಲ್ಲಿ ಗುರುಪೂಜೆಯನ್ನು ಮಾಡುತ್ತಾರೆ.
ವಿಷ್ಣು ಎಂದರೆ ಗುರು ಎಂದೂ ವಿಷ್ಣು ವಿಗೆ ಶ್ರೀ ಕಾರ ಇರುವುದರಿಂದಲೂ (ಶ್ರೀದಃ ಶ್ರೀಶಃ ಶ್ರೀನಿವಾಸಃ ಶ್ರೀನಿಧಿಃ ಶ್ರೀವಿಭಾವನಃ) ಶ್ರೀಕಾರದಿಂದ ಗುರುವನ್ನು ಅರ್ಚಿಸುತ್ತಾರೆ, ಅಥವಾ ಕೆಲವರು "ಓಂ" ಕಾರ ಮಂತ್ರಗಳ ಆದ್ಯಕ್ಷರವಾಗಿರುವುದರಿಂದ "ಓಂ" ಕಾರ ಗುರುವಿನ ಮೂಲಮಂತ್ರವಾಗಿರುವುದರಿಂದ,ಶಂಖದ ಮೂಲಕ ಓಂ ಕಾರ ಉಂಟಾಗುವ ಕಾರಣದಿಂದ ಶಂಖದ ಚಿತ್ರ ಬರೆದು ಪೂಜಿಸುವರು.
ನಮ್ಮಲ್ಲಿ ಹೆಚ್ಚಾಗಿ ಮನೆಗಳಲ್ಲಿ ಪೂಜಿಸುವ ಸೂರ್ಯ,ಗಣಪತ್ಯಾದಿ ದೇವತೆಗಳ ಶಿಲೆ,ಪ್ರತಿಮೆಗಳಿದ್ದರೆ..
ಅಲ್ಲಿಗೇ ಹೋಗಿ ಮೊದಲು ಹೂ,ಗಂಧ,ಅಕ್ಷತೆ ಗಳನ್ನು ಅರ್ಪಿಸಲು ಹೇಳುತ್ತಾರೆ. ಗುರುವಿಗೆ ಮಂಡಲ ರಚನೆ ಮಾಡುವ ಸಂದರ್ಭ ಕಡಿಮೆ..
ಚಿತ್ರದಲ್ಲಿ ೩ ನೇ ಅಂಕೆಯಲ್ಲಿರುವುದು ಮಲಯಾಳ ಸಂಪ್ರದಾಯದವರು ಬರೆಯುವ ಶ್ರೀ ಕಾರ..
No comments:
Post a Comment