ಜಗವಿರುವುದೆ ಹೀಗೆ..
ಮುಗಿಲಿನ ಮುನಿಸಿನ ಹಾಗೆ..
ನೀರಾಗಿ ಹರಿದರೆ ವರ್ಷಧಾರೆ..
ಜಗವಿರುವುದೆ ಹೀಗೆ..
ಮುಗುದೆಯ ಮನಸಿನ ಹಾಗೆ..
ಕರಗಿ ಹರಿದರೆ ಹರ್ಷಧಾರೆ...
ಜಗವಿರುವುದೆ ಹೀಗೆ..
ಛಲವಾದಿಗೆ
ಹುಸಿಮುನಿಸಿನ ಹಾಗೆ..
ನಿಶ್ಚಲವಾದಿಗೆ
ಹಸಿಮೆಣಸಿನ ಹಾಗೆ..!!
ಜಗವಿರುವುದೆ ಹಾಗೆ..
ನಿತ್ಯವೂ(ತಿಳಿಯುವುದು)
ವೃತ್ತ ಪತ್ರಿಕೆಯಲ್ಲಿರುವಂತೆ..
ಸತ್ಯವೂ(ತಿಳಿಯದುದು)
ರಕ್ತ ಮೃತ್ತಿಕೆಯಲ್ಲಿರುವಂತೆ...
ಜಗವಿರುವುದೆ ಹಾಗೆ..
ನಕ್ಕರೂ ಕಳೆಯದು..
ಕ್ಷಣದಿ ಹಾಗೆ..
ಅತ್ತರೂ ಕರಗದು
ಮನದ ಬೇಗೆ..
ನಿಜವಿರುವುದೇ ಹೀಗೆ......
ReplyDeleteಉತ್ತಮ ಕವನ
ಅಭಿನಂಧನೆಗಳು..